
ತೇರದಾಳ : ಬಾಗಲಕೊಟ ವಿಶ್ವವಿದ್ಯಾಲಯ,ಜಮಖಂಡಿಜುಲೈನಲ್ಲಿ ನಡೆಸಿದ ಬಿ.ಕಾಂ 2 ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ಪ್ರತಿಷ್ಟಿತ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಬಿ.ಕಾಂ. 2ನೇ ಸೆಮಿಸ್ಟರನಲ್ಲಿ ನಂದಿನಿ ಹುದ್ದಾರ 650 ಕ್ಕೆ 578 ಅಂಕ ಪಡೆದು ಶೇ.88.92 ಪಡೆಯು ವ ಮೂಲಕ ಪ್ರಥಮ ಸ್ಥಾನ, ಭಾಗ್ಯಶ್ರೀ ಕೌಜಲಗಿ 573 ಅಂಕಗಳೊಂದಿಗೆ ಶೇ.88.15 ಪಡೆಯುವ ಮೂಲಕ ದ್ವಿತೀಯ ಸ್ಥಾನ, ಲಕ್ಷ್ಮೀ ಸವಸುದ್ದಿ 568 ಅಂಕ ಗಳೊಂದಿಗೆ ಶೇ.87.38 ತೃತೀಯ ಸ್ಥಾನ ಪಡೆದು ಕಾಲೇ ಜಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. ವಿದ್ಯಾ ರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್ ಡಾ.ಮಹಾವೀರ ದಾನಿಗೊಂಡ, ವ್ಯವಸ್ಥಾಪಕ ನಿರ್ದೇಶಕ ಡಾ. ಪುಷ್ಪದಂತ ಎಂ.ದಾನಿಗೊಂಡ ಮತ್ತು ಪ್ರಾಚಾರ್ಯ ಕೆ.ಜಿ.ಗುರವ, ಉಪನ್ಯಾಸಕರು ಅಭಿನಂದಿಸಿದ್ದಾರೆ.

