ಶಿಕ್ಷಣದಿಂದ ಮಾತ್ರ ಗೌರವಯುತ ಬದುಕು ಸಾಧ್ಯ ; ಹಿರಿಯ ಸಿವಿಲ್ ನ್ಯಾಯಾಧೀಶ ಆಶಪ್ಪ ಸಣಮನಿ ಕರೆ ತೇರದಾಳ: ವಿದ್ಯಾರ್ಥಿ ಜೀವನದ ಆರಂಭಿಕ...
ಬಾಗಲಕೋಟೆ
ತೇರದಾಳ : ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ...
ಪೂಜ್ಯ ನಿರಂಜನ ಶ್ರೀಗಳು ೧೫ ದಿನಗಳ ಪ್ರವಚನ ಮುಗಿಸಿ ಹುನಗುಂದ ಪಟ್ಟಣಕ್ಕೆ ತೆರಳಲು ಸಿದ್ಧರಾದಾಗ ಅವರನ್ನು ಬಿಳ್ಕೊಡಲು ಸೇರಿದ್ದ ನೂರಾರು ಭಕ್ತರು ಭಾವಪರವಶರಾದರು. ಪೂಜ್ಯರ ಕುರಿತು ಮಾತನಾಡಿದ ಅಕ್ಕನ ಬಳಗದ ಶರಣೆ ಕಮಲಕ್ಕ ವಾಲಿ ನಮ್ಮ ಪೂರ್ವ ಜನ್ಮದ ಪುಣ್ಯವೇನೊ ನಮಗೆ ನಿರಂಜನ ಶ್ರೀಗಳು ದೊರಕಿದರು. ಪೂಜ್ಯರು ತಮ್ಮ ಪ್ರವಚನದುದ್ದಕ್ಕೂ ಶರಣ ಶರಣೆಯರ ಜೀವನದ ಅತ್ಯುತ್ತಮ ಮೌಲ್ಯಗಳನ್ನು ಹೇಳುವುದರ ಮೂಲಕ ಭಕ್ತಿ ಕೇವಲ ಪೂಜೆಗೆ ಸೀಮಿತವಾಗದೆ ನೊಂದವರಿಗೆ ಸಹಾಯ, ಶಿಕ್ಷಣಕ್ಕೆ ಪ್ರೋತ್ಸಾಹ, ಅನ್ನದಾನ, ಆರೋಗ್ಯ , ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು. ಅಷ್ಟೇ ಅಲ್ಲ ಸಮಾಜದಲ್ಲಿ ಶಾಂತಿ, ಸಹೋದರತ್ವ, ಸೇವಾ ಮನೋಭಾವ, ನೈತಿಕ ಮೌಲ್ಯಗಳ ಮಹತ್ವ ಹೇಳಿಕೊಟ್ಟರು. ನಿಸರ್ಗದ ನಿಯಮದಂತೆ ನಮ್ಮಬದುಕಿನುದ್ದಕ್ಕೂ ಕಲಿಯುತ್ತಲೇ ಇರಬೇಕೆಂದರು. ಎಂತಹ ಕಷ್ಟ ಬಂದರೂ ಸತ್ಯವನ್ನು ಬಿಡಬೇಡಿ, ಹೃದಯದಲ್ಲಿ ಸದಾ ಪ್ರೀತಿ, ಕರುಣೆಯಿರಲಿ, ಜಾತಿ,ವರ್ಗ,ಬಡ–ಶ್ರೀಮಂತ ಎಂಬ ಬೇಧ ವಿಲ್ಲದೆ ಬದುಕಬೇಂದರು. ಒಟ್ಟಿನಲ್ಲಿ ಹೇಳುವುದೆಂದರೆ ನಮ್ಮಿಂದ ಏನನ್ನು ಅಪೇಕ್ಷಿಸಿಸದೆ ನಮ್ಮೆಲ್ಲರನ್ನೂ ಉದ್ದಾರಮಾಡಿದ ಶ್ರೀಗಳು ನಮ್ಮಿಂದ ದೂರವಾಗುವುದು ನಮ್ಮ ಮನಸ್ಸಿಗೆ ತುಂಬಾ ಭಾರವಾಗಿದೆ. ನಿರಂತರವಾಗಿ ನಮ್ಮನ್ನು ನಗೆಸುತ್ತಾ ಆದ್ಯಾತ್ಮದೊಂದಿಗೆ ಆತ್ಮಸುದ್ಧಿ ಮಾಡುವುದರೊಂದಿಗೆ ನಿರಂತರ ಯೋಗ ಕಲಿಸಿ ಆರೋಗ್ಯದ ದೀಪವನ್ನು ಹಚ್ಚಿದರು . ಇಂತಹ ಸತ್ಸಂಗ ಏರ್ಪಡಿಸಿದ ವಿರಕ್ತಮಠದ ಟ್ರಸ್ಟ ಕಮಿಟಿಯ ಅಧ್ಯಕ್ಷರಿಗೂ ಹಾಗೂ ಸರ್ವ ಸದಸ್ಯರಿಗೂ ನಾವು ಧನ್ಯವಾದ ತಿಳಿಸುತ್ತೇವೆ ಎಂದರು. ಭಾವುಕರಾದ ಎಲ್ಲ ಭಕ್ತರ ಕುರಿತು ಮಾತನಾಡಿದ ಪೂಜ್ಯರು ಕೂಡುವುದು ಆಕಸ್ಮಿಕವಾದರೂ ಅಗಲುವುದು ಅನಿವಾರ್ಯವಾಗುತ್ತದೆ. ಸದಾ ತಾವು ನಗತಾ ಇರಬೇಕು. ನಿಮ್ಮ ಮನದಲ್ಲಿ ಸದಾ ಪ್ರೀತಿ, ಕರುಣೆಯಿರಲಿ, ಪ್ರತಿದಿನ ಯೋಗ ಮಾಡಿ ನಿವೇಲ್ಲರೂ ಆರೋಗ್ಯವಂತರಾಗಿ ಬಾಳಬೇಕು ಇದೊಂದೆ ನಾನು ನಿಮ್ಮಿಂದ ಬಯಸುವುದು ಎಂದರು.
ರಬಕವಿ-ಬನಹಟ್ಟಿ : ಶಿಕ್ಷಣ ಕ್ಷೇತ್ರದಲ್ಲಿ 15 ವರ್ಷಗಳ ಕಾಲ ಮುಖ್ಯ ಗುರುಗಳಾಗಿ ಸಲ್ಲಿಸಿದ ಸೇವೆ ಹಾಗೂ ಸಾಮಾಜಿಕ ಮತ್ತು ಜನಪರ ಕಾರ್ಯಗಳನ್ನು ಗುರುತಿಸಿ,...
ಬನಹಟ್ಟಿಯಲ್ಲಿ ಉದ್ವಿಗ್ನ : 133ನೇ ಕಲಂ ಜಾರಿಪ್ರಜಾಸೌಧಕ್ಕಾಗಿ ಹೋರಾಟ 37ನೇ ದಿನಕ್ಕೆ; ಏಳು ಉಪವಾಸ ಸತ್ಯಾಗ್ರಹಿಗಳು ಆಸ್ಪತ್ರೆಗೆ ಬನಹಟ್ಟಿ: ರಬಕವಿ–ಬನಹಟ್ಟಿ ಅವಳಿ ನಗರದ...
ತೇರದಾಳ್ ಪಟ್ಟಣದಲ್ಲಿ ಈದ್ ಮಿಲಾದುನ್ನಬಿ ಭರ್ಜರಿ ಆಚರಣೆ ತೇರದಾಳ್: ಪಟ್ಟಣದ ಜಾಮಿಯಾ ಮಸೀದಿ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸ್ಮರಣಾರ್ಥ...

