
ತೇರದಾಳ : ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ಕೊಟ್ಟ ಕರ್ನಾಟಕ ಬಂದ ತಾಲೂಕಿನಾದ್ಯಂತ ಸಂಪೂರ್ಣ ಯಶಸ್ವಿಯಾಗಿದ್ದು,ರೈತರು ರಸ್ತೆ ತಡೆ ನಡೆಸಿ,ಅರೆ ಬೆತ್ತಲಾಗಿ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ತೇರದಾಳ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು,ರಸ್ತೆಗಳಿಗೆ ಅಡ್ಡಲಾಗಿ ಮುಳ್ಳುಗಂಟಿ ಹಾಗೂ ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ಪ್ರತಿಭಟನಾಕಾರರು ಕಬ್ಬಿಗೆ ಕನಿಷ್ಠ ೫೫೦೦ ಬೆಂಬಲ ಬೆಲೆಯನ್ನು ನೀಡಲೇಬೇಕು, ಎಮ್ಎಸ್ಪಿ ದರ ಪರಿಷ್ಕರಣೆ ಆಗಲೇಬೇಕು,ರೈತರಿಗೆ ಕನಿಷ್ಠ ೮ ಗಂಟೆ ವಿದ್ಯುತ್ ಪೂರೈಸಬೇಕು,ಸಾಲಮನ್ನಾ ಸೇರಿದಂತೆ ಅನೇಕ ಬೇಡಿಕೆಗಳನ್ನು ವ್ಯಕ್ತಪಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಮೊಂಡು ಧೋರಣೆಯನ್ನು ಬಿಟ್ಟು ರೈತರ ಹಿತ ಕಾಪಾಡುವಲ್ಲಿ ಮುಂದಾಗಬೇಕು, ಇಲ್ಲವಾದಲ್ಲಿ ಶಾಂತವಾಗಿರುವ ಅನ್ನದಾತರು ಕ್ರಾಂತಿ ಮಾಡಬೇಕಾಗುತ್ತದೆಯಂದು ಎಚ್ಚರಿಸಿದ ಅವರು ಸರ್ಕಾರ ಹಣ ಅಗತ್ಯಬಿದ್ದಲ್ಲಿ ಮುದ್ರಿಸಿಕೊಳ್ಳಬಹುದು ಆದರೆ ಅನ್ನ ಅಗತ್ಯವಾದಲ್ಲಿ ಮುದ್ರಿಸಲು ರೈತನನ್ನು ಹೊರತು ಪಡಿಸಿ ಜಗತ್ತಿನ ಯಾವ ತಂತ್ರಜ್ಞಾನಿಗೂ ಸಾಧ್ಯವಿಲ್ಲವೆಂದು ಅನ್ನದಾತನ ಉಳಿವಿನ ಅಗತ್ಯತೆಯ ನಿದರ್ಶನ ನೀಡಿದರು.
ಅರೆ ಬೆತ್ತಲಾದ ಅಣುಕು ಪ್ರದರ್ಶನ : ಅರೆ ಬೆತ್ತಲಾಗಿ ವಿನೂತನವಾಗಿ ಪ್ರತಿಭಟಿಸಿದ ತಾಲೂಕಿನ ಹಳಿಂಗಳಿ ಗ್ರಾಮದ ಗ್ರಾಮಸ್ಥರು,ಸರ್ಕಾರ ಹಾಗೂ ಕಾರ್ಖಾನೆಗಳ ಸುಲುಗೆಯಿಂದ ಅನ್ನದಾತರ ಬದುಕು ಕತ್ತಲೆ ಮಾತ್ರವಲ್ಲ ಬೆತ್ತಲಾಗಿದೆಯಂದು ಅಣುಕು ಪ್ರದರ್ಶನ ನೀಡಿದರು.
ಕನ್ನಡ ಪರ,ದಲಿತ,ಟಿಪ್ಪು ಸುಲ್ತಾನ್ ಆಜಾದ್ ವೇದಿಕೆ,ವರ್ತಕರ ಸಂಘ,ಖಾಸಗಿ ಶಾಲಾ ಕಾಲೇಜುಗಳು, ಸೇರಿದಂತೆ ಬಹುತೇಕ ಸಂಘಟನೆಗಳು ಕರ್ನಾಟಕ ಬಂದ್ ಸಂಪೂರ್ಣವಾಗಿ ಬೆಂಬಲಿಸಿದ್ದರು.
ಗಮನ ಸೆಳೆದ ಟ್ರಾö್ಯಕ್ಟರ್ ಜಾತಾ : ಪ್ರತಿಭಟನೆಗೆ ಇಂಬು ಎಂಬAತೆ ರೈತರು ತಮ್ಮ ಖಾಲಿ ಟ್ರಾö್ಯಕ್ಟರ್ಗಳನ್ನು ಇಡೀ ತಾಲೂಕಿನಾದ್ಯಂತ ರ್ಯಾಲಿ ಕೈಗೊಳ್ಳುವುದರ ಮೂಲಕ ಸರ್ಕಾರದ ಮಲತಾಯಿ ಧೋರಣೆಗಳನ್ನು ಬಿತ್ತರಿಸುವ ಜಾನಪದ ಹಾಡುಗಳನ್ನು ಹಚ್ಚಿ ವಿನೂತನವಾಗಿ ಪ್ರತಿಭಟಿಸಿದರು.
ಹತ್ತನೆ ದಿನಕ್ಕೆ ಕಾಲಿಟ್ಟ ಜೈನ ಮುನಿ ಆಚಾರ್ಯ ೧೦೮ ಶ್ರೀ ಕುಲರತ್ನ ಭೂಷಣ ಮುನಿಗಳ ಉಪವಾಸ : ಅನ್ನದಾತರ ಹೋರಾಟಕ್ಕೆ ಬೆಂಬಲವಾಗಿ ಆಹಾರ ತ್ಯಜಿಸಿದ ಹಳಿಂಗಳಿಯ ಜೈನ ಮುನಿಗಳ ಉಪವಾಸ ಹತ್ತನೇಯ ದಿನಕ್ಕೆ ಕಾಲಿಟ್ಟಿದ್ದು,ರೈತರ ಬೇಡಿಕೆ ಈಡೇರುವವರೆಗೆ ಆಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಬಸ್ ಸಂಚಾರ ವಿಲ್ಲದೇ ಪರದಾಡಿದ ಪ್ರಯಾಣಿಕರು : ದೂರದ ಊರಿಗೆ ಹೊಗಬೇಕಾಗಿದ್ದ ಪ್ರಯಾಣಿಕರು ರಸ್ತೆ ಸಂಚಾರವಿಲ್ಲದೆ ಪರದಾಡಿದ ಪ್ರಸಂಗ ಒಂದೆಡೆಯಾದರೆ ಅನಾರೋಗ್ಯದಿಂದ ಆಸ್ಪತ್ರಗೆ ತೆರಳಲು ರೋಗಿಗಳು ಹರ ಸಾಹಸಪಡುವ ಸನ್ನಿವೇಷಗಳು ಗೋಚರವಾದವು.
ಪ್ರತಿಭಟನೆ ಶಾಂತಿಯುತವಾಗಿ ಜರುಗಿದ್ದು,ಯಾವುದೇ ಅಹಿತಕರ ಘಟನೆಗಳು ವರದಿಯಾಗಿರುವುದಿಲ್ಲ. ಮುಖಂಡರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರ್ಯತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

