ಟ್ರೆಂಡಿಂಗ್

ತೇರದಾಳ ಪಟ್ಟಣದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ​ರೇಷ್ಮೆ, ಕಾಫಿ ಉತ್ಪಾದನೆಯಲ್ಲಿ ದೇಶಕ್ಕೇ ರಾಜ್ಯ ನಂಬರ್ ಒನ್ ​ವಿಶ್ವೇಶ್ವರಯ್ಯ, ಅನಿಲ್ ಕುಂಬ್ಳೆ, ಡಾ....
  ಶಿಕ್ಷಣದಿಂದ ಮಾತ್ರ ಗೌರವಯುತ ಬದುಕು ಸಾಧ್ಯ ; ಹಿರಿಯ ಸಿವಿಲ್ ನ್ಯಾಯಾಧೀಶ ಆಶಪ್ಪ ಸಣಮನಿ ಕರೆ ತೇರದಾಳ: ವಿದ್ಯಾರ್ಥಿ ಜೀವನದ ಆರಂಭಿಕ...
ತೇರದಾಳ : ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ...
ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ‘ಎಲ್ಡರ್‌ಲೈನ್ – 14567′ ಸಹಾಯವಾಣಿ ಸದ್ಬಳಕೆಗೆ ಕರೆ ​ತೇರದಾಳದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ​ತೇರದಾಳ: ಇಂದಿನ...
​ಶಿಕ್ಷಣ ತಪಸ್ವಿ ಡಾ. ಡಿ. ಸಿ. ಪಾವಟೆ: ಮಮದಾಪುರದಿಂದ ವಿಶ್ವಮಟ್ಟದವರೆಗೆ ಬೆಳಗಿದ ಜ್ಞಾನಜ್ಯೋತಿ ​– ಬಸವರಾಜ ಬಾಳಿಕಾಯಿ, ತೇರದಾಳ ​ಇತ್ತೀಚೆಗೆ ತೇರದಾಳ ಪಟ್ಟಣದ...
ಪೂಜ್ಯ ನಿರಂಜನ ಶ್ರೀಗಳು ೧೫ ದಿನಗಳ ಪ್ರವಚನ ಮುಗಿಸಿ ಹುನಗುಂದ ಪಟ್ಟಣಕ್ಕೆ ತೆರಳಲು ಸಿದ್ಧರಾದಾಗ ಅವರನ್ನು ಬಿಳ್ಕೊಡಲು ಸೇರಿದ್ದ ನೂರಾರು ಭಕ್ತರು ಭಾವಪರವಶರಾದರು.                    ಪೂಜ್ಯರ ಕುರಿತು ಮಾತನಾಡಿದ ಅಕ್ಕನ ಬಳಗದ ಶರಣೆ ಕಮಲಕ್ಕ ವಾಲಿ ನಮ್ಮ ಪೂರ್ವ ಜನ್ಮದ ಪುಣ್ಯವೇನೊ ನಮಗೆ ನಿರಂಜನ ಶ್ರೀಗಳು ದೊರಕಿದರು. ಪೂಜ್ಯರು ತಮ್ಮ ಪ್ರವಚನದುದ್ದಕ್ಕೂ ಶರಣ ಶರಣೆಯರ ಜೀವನದ ಅತ್ಯುತ್ತಮ ಮೌಲ್ಯಗಳನ್ನು ಹೇಳುವುದರ ಮೂಲಕ ಭಕ್ತಿ ಕೇವಲ ಪೂಜೆಗೆ ಸೀಮಿತವಾಗದೆ ನೊಂದವರಿಗೆ ಸಹಾಯ, ಶಿಕ್ಷಣಕ್ಕೆ ಪ್ರೋತ್ಸಾಹ, ಅನ್ನದಾನ, ಆರೋಗ್ಯ , ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು. ಅಷ್ಟೇ ಅಲ್ಲ ಸಮಾಜದಲ್ಲಿ ಶಾಂತಿ, ಸಹೋದರತ್ವ, ಸೇವಾ ಮನೋಭಾವ, ನೈತಿಕ ಮೌಲ್ಯಗಳ ಮಹತ್ವ ಹೇಳಿಕೊಟ್ಟರು. ನಿಸರ್ಗದ ನಿಯಮದಂತೆ ನಮ್ಮಬದುಕಿನುದ್ದಕ್ಕೂ ಕಲಿಯುತ್ತಲೇ ಇರಬೇಕೆಂದರು. ಎಂತಹ ಕಷ್ಟ ಬಂದರೂ ಸತ್ಯವನ್ನು ಬಿಡಬೇಡಿ, ಹೃದಯದಲ್ಲಿ ಸದಾ ಪ್ರೀತಿ, ಕರುಣೆಯಿರಲಿ, ಜಾತಿ,ವರ್ಗ,ಬಡ–ಶ್ರೀಮಂತ ಎಂಬ ಬೇಧ ವಿಲ್ಲದೆ ಬದುಕಬೇಂದರು. ಒಟ್ಟಿನಲ್ಲಿ ಹೇಳುವುದೆಂದರೆ ನಮ್ಮಿಂದ ಏನನ್ನು ಅಪೇಕ್ಷಿಸಿಸದೆ ನಮ್ಮೆಲ್ಲರನ್ನೂ ಉದ್ದಾರಮಾಡಿದ ಶ್ರೀಗಳು ನಮ್ಮಿಂದ ದೂರವಾಗುವುದು ನಮ್ಮ ಮನಸ್ಸಿಗೆ ತುಂಬಾ ಭಾರವಾಗಿದೆ. ನಿರಂತರವಾಗಿ ನಮ್ಮನ್ನು ನಗೆಸುತ್ತಾ ಆದ್ಯಾತ್ಮದೊಂದಿಗೆ ಆತ್ಮಸುದ್ಧಿ ಮಾಡುವುದರೊಂದಿಗೆ ನಿರಂತರ ಯೋಗ ಕಲಿಸಿ ಆರೋಗ್ಯದ ದೀಪವನ್ನು ಹಚ್ಚಿದರು . ಇಂತಹ ಸತ್ಸಂಗ ಏರ್ಪಡಿಸಿದ ವಿರಕ್ತಮಠದ ಟ್ರಸ್ಟ ಕಮಿಟಿಯ ಅಧ್ಯಕ್ಷರಿಗೂ ಹಾಗೂ ಸರ್ವ ಸದಸ್ಯರಿಗೂ ನಾವು ಧನ್ಯವಾದ ತಿಳಿಸುತ್ತೇವೆ ಎಂದರು.        ಭಾವುಕರಾದ ಎಲ್ಲ ಭಕ್ತರ ಕುರಿತು ಮಾತನಾಡಿದ ಪೂಜ್ಯರು ಕೂಡುವುದು ಆಕಸ್ಮಿಕವಾದರೂ ಅಗಲುವುದು ಅನಿವಾರ್ಯವಾಗುತ್ತದೆ. ಸದಾ ತಾವು ನಗತಾ ಇರಬೇಕು.  ನಿಮ್ಮ ಮನದಲ್ಲಿ ಸದಾ ಪ್ರೀತಿ, ಕರುಣೆಯಿರಲಿ, ಪ್ರತಿದಿನ ಯೋಗ ಮಾಡಿ ನಿವೇಲ್ಲರೂ ಆರೋಗ್ಯವಂತರಾಗಿ ಬಾಳಬೇಕು ಇದೊಂದೆ ನಾನು ನಿಮ್ಮಿಂದ ಬಯಸುವುದು ಎಂದರು.            
ತೇರದಾಳ: ದಶಲಕ್ಷಣ ಪರ್ವದ ಕೊನೆಯ ದಿನದ ಅಂಗವಾಗಿ ಪಟ್ಟಣದ ನೇಮಿನಾಥ ಗೋಂಕ ಜಿನಾಲಯದಲ್ಲಿ ಶ್ರಾವಕ-ಶ್ರಾವಕಿಯರಿಂದ ನೋಂಪಿ ವಿಸರ್ಜನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು. ಈ...

ಉರ್ದು ಮಾಧ್ಯಮ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ಆಗ್ರಹ : ಸಚಿವ ವಿಜಯಾನಂದ ಕಾಶಪ್ಪನವರ ಅವರಿಗೆ ತೇರದಾಳ ಮತಕ್ಷೇತ್ರದ ಮುಖಂಡರಿಂದ ಮನವಿ ತೇರದಾಳ: ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ, ತೇರದಾಳ ಮತಕ್ಷೇತ್ರದ ಮುಖಂಡರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿಜಯಾನಂದ ಕಾಶಪ್ಪನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತೇರದಾಳ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಗತ್ಯವಿರುವ ಹುದ್ದೆಗಳನ್ನು ಗುರುತಿಸಿ ಹೆಚ್ಚುವರಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶೀಘ್ರವಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಮುಖಂಡರು ಸಚಿವರಲ್ಲಿ ಮನವಿ ಮಾಡಿದರು. ಉರ್ದು ಮಾಧ್ಯಮ ಶಾಲೆಗಳಲ್ಲಿ ಹಲವು ವರ್ಷಗಳಿಂದ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ವಿಷಯವಾರು ಬೋಧನೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿಶೇಷವಾಗಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ, ಹೆಚ್ಚುವರಿ ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮುಖಂಡರು ಮನವಿ ಮಾಡಿದರು.

ತೇರದಾಳ  : ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ, ತೇರದಾಳ...
Read More Read more about ಉರ್ದು ಮಾಧ್ಯಮ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ಆಗ್ರಹ : ಸಚಿವ ವಿಜಯಾನಂದ ಕಾಶಪ್ಪನವರ ಅವರಿಗೆ ತೇರದಾಳ ಮತಕ್ಷೇತ್ರದ ಮುಖಂಡರಿಂದ ಮನವಿ ತೇರದಾಳ: ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ, ತೇರದಾಳ ಮತಕ್ಷೇತ್ರದ ಮುಖಂಡರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿಜಯಾನಂದ ಕಾಶಪ್ಪನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತೇರದಾಳ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಗತ್ಯವಿರುವ ಹುದ್ದೆಗಳನ್ನು ಗುರುತಿಸಿ ಹೆಚ್ಚುವರಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶೀಘ್ರವಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಮುಖಂಡರು ಸಚಿವರಲ್ಲಿ ಮನವಿ ಮಾಡಿದರು. ಉರ್ದು ಮಾಧ್ಯಮ ಶಾಲೆಗಳಲ್ಲಿ ಹಲವು ವರ್ಷಗಳಿಂದ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ವಿಷಯವಾರು ಬೋಧನೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿಶೇಷವಾಗಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ, ಹೆಚ್ಚುವರಿ ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮುಖಂಡರು ಮನವಿ ಮಾಡಿದರು.