ತೇರದಾಳ : ತಾಲೂಕಿನ ಹಳಿಂಗಳಿ ಗ್ರಾಮದ ಆರಾಧ್ಯ ಶ್ರೀ ಬ್ರಹ್ಮದೇವರ ಸಮುದಾಯ ಭವನಕ್ಕೆ ಪ್ರಸಕ್ತ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅಂದಾಜು 5 ಲಕ್ಷ ಮೊತ್ತದ ಸಮುದಾಯ ಭವನ ಕಾಮಗಾರಿಗೆ ತೇರದಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಸಿದ್ದು ಸವದಿ ಗುದ್ದಲಿ ಪೂಜೆಯನ್ನು ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ನಮ್ಮ ಅಧಿಕಾರವಧಿಯಲ್ಲಿ ಸರ್ವ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಅಗತ್ಯವಿರುವ ಸೇವೆಯನ್ನು ಸಮರ್ಪಕವಾಗಿ ಸಲ್ಲಿಸಿದ್ದು, ಸಮುದಾಯ ಬಾಂಧವರ ಮನವಿಗೆ ಸ್ಪಂದಿಸಿ ಗ್ರಾಮದ ಹೃದಯ ಭಾಗದಲ್ಲಿರುವ ಶ್ರೀ ಬ್ರಹ್ಮದೇವರ ದೇವಸ್ಥಾನಕ್ಕೆ ಅಗತ್ಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಮುದಾಯ ಭವನದ ಅವಶ್ಯಕವಾಗಿರುವುದನ್ನು ಪರಿಶೀಲಿಸಿ ನಮ್ಮ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ 5 ಲಕ್ಷಗಳನ್ನು ಮಂಜೂರಿಸಿದ್ದು,ಅಗತ್ಯವಿದ್ದಲ್ಲಿ ಮುಂದಿನ ಕ್ರೀಯಾ ಯೋಜನೆಯಲ್ಲಿ ಹೆಚ್ಚಿನ ಅನುದಾನವನ್ನು ಮಂಜೂರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಮಾಜಿ ತಾ.ಪಂ ಸದಸ್ಯರಾದ ಬಿ.ಬಿ ವೆಂಕಟಾಪೂರ,ತೇರದಾಳ ಭಾಜಪ ಗ್ರಾಮೀಣ ಮಂಡಳ ಅಧ್ಯಕ್ಷ ಸುರೇಶ ಅಕ್ಕಿವಾಟ,ಮಾಜಿ ಗ್ರಾ.ಪಂ ಅಧ್ಯಕ್ಷ ಪರಪ್ಪ ಹಿಪ್ಪರಗಿ,ಮುಖಂಡರಾದ ಮಾದವರಾವ ಪಾಟೀಲ,ಗಂಗಪ್ಪ ಮಗದುಮ್,ಅಲ್ಲಪ್ಪ ಕಾಲತಿಪ್ಪಿ,ತಾತೇಸಾಬ ಉಪಾಧ್ಯೆ,ಮಹಾವೀರ ಪಾಟೀಲ,ಆಧಿನಾಥ ಕುಳ್ಳಿ, ಭುಜಬಲ್ಲಿ ನಂದೆಪ್ಪನವರ,ಮಹಾವೀರ ದೇಸಾಯಿ,ತವನಪ್ಪ ಹನಮಣ್ಣವರ,ಸಚಿನ ಹುಲಕುಂದ,ಬನಗೌಡ ಪಾಟೀಲ ಸೇರಿದಂತೆ ಮುಖಂಡರು ಇದ್ದರು.

ಹೇಳಿಕೆ : ತಮ್ಮ ಸೇವಾವಧಿಯಲ್ಲಿ ರಾಜಕೀಯವನ್ನು ಮರೆತು ಸರ್ವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳುವ ನಮ್ಮ ನೆಚ್ಚಿನ ಸಾಸಕರ ನಡೆ ಎಲ್ಲರಿಗೂ ಮಾದರಿಯಾಗಿದ್ದು, ನಮ್ಮ ಗ್ರಾಮಕ್ಕೆ ಇವರು ನೀಡಿರುವ ಕೊಡುಗೆಗೆ ಗ್ರಾಮದ ಪ್ರತಿನಿಧಿಯಾಗಿ ಸದಾ ಚಿರಋಣಿ. ಶ್ರೀ ಬಿ.ಬಿ ವೆಂಕಟಾಪೂರ , ಮಾಜಿ ತಾ.ಪಂ ಸದಸ್ಯರು,ಹಳಿಂಗಳಿ
ಚಿತ್ರಸುದ್ದಿ ; ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ವಿಕ್ಷಿಸಿದ ಶಾಸಕ ಸಿದ್ದು ಸವದಿ ಹಾಗೂ ಮುಖಂಡರು.

