ಶಿಕ್ಷಣದ ಜೊತೆಗೆ ಮಕ್ಕಳಿಗೆ ಧಾರ್ಮಿಕ ಮೌಲ್ಯಗಳನ್ನು ಕಲಿಸಿರಿ ಜೈನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಾಗರಾಜ್ ಅಭಿಮತ

ತೇರದಾಳ : ಇಂದು ತಂತ್ರಜ್ಞಾನದ ಮಿತಿಮೀರಿದ ಬಳಕೆ, ಮೊಬೈಲ್ ಬಳಕೆಯ ದುಷ್ಪರಿಣಾಮದಿಂದ ಯುವ ಪೀಳಿಗೆ ನೈತಿಕವಾಗಿ ಅಧಪತನವಾಗುತ್ತಿರುವುದು ಅತ್ಯಂತ ಕಳವಳಕಾರಿ. ಯುವಜನತೆಯನ್ನು ದೇಶದ ಸತ್ಪಜೆಯಾಗಿಸಲು ಎಲ್ಲ ಪಾಲಕರು ಶಿಕ್ಷಣದ ಜತೆಗೆ ನೈತಿಕ ಮೌಲ್ಯ ಹಾಗೂ ಸನಾತನ ಪರಂಪರೆ ಪಾಲಿಸಬೇಕಿದೆ ಎಂದು ಪದವಿಪೂರ್ವ ಉಪನ್ಯಾಸಕರ ಸಂಘ ಬೆಳಗಾವಿ ಅಧ್ಯಕ್ಷರಾದ ಡಾಕ್ಟರ್ ನಾಗರಾಜ್ ಮರೆಣ್ಣವರ ಕರೆ ನೀಡಿದರು.ಜಿನ ಸೇನಾಚಾರ್ಯ ಸಮುದಾಯ ಭವನ ಗುರುಕುಲ ಆವರಣದ ಸಭಾಂಗಣದಲ್ಲಿ
ಕರ್ನಾಟಕ ಜೈನ ಅಲ್ಪಸಂಖ್ಯಾತರ ನೌಕರರ ಕ್ಷೇಮಾಭಿವೃದ್ಧಿ ಸಂಘ ತೇರದಾಳ, ರಬಕವಿ-ಬನಹಟ್ಟಿ ಹಾಗೂ ಪಟ್ಟಣದ ಜೈನ ಸಮಾಜದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 2025-26 ಸಾಲಿನ ಜೈನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಯುವಪೀಳಿಗೆ ಆಧುನಿಕತೆಯ ಭರಾಟೆಯಲ್ಲಿ ಮೂಲತ್ವ ಕಳೆದುಕೊಂಡು
ಭವಿಷ್ಯದ ಬದುಕು ಹಾಳು ಮಾಡಿಕೊಳ್ಳುತ್ತಿದೆ. ಪಾಲಕರು ಮಕ್ಕಳ ನಡೆಯ ಬಗ್ಗೆ ನಿಗಾ ವಹಿಸದೇ ಸ್ವಾತಂತ್ರ್ಯದ ಹೆಸರಲ್ಲಿ ಸ್ಟೇಚ್ಛೆಯಾಗಿ ಬಿಟ್ಟಿರುವುದೇ ಇದಕ್ಕೆಲ್ಲ ಕಾರಣ. ಎಲ್ಲ ತಂದೆ-ತಾಯಂದಿರು ತಮ್ಮ ಪ್ರೌಢ ವಯಸ್ಸಿನ ಮಕ್ಕಳ ಚಲನವಲನ ಗಮನಿಸಬೇಕು. ಶಿಕ್ಷಣ ಜತೆಗೆ ಸಾಂಸ್ಕೃತಿಕ, ಧಾರ್ಮಿಕ ಮೌಲ್ಯಗಳನ್ನು ಬೆಳೆಸ ಬೇಕೆಂದರು. ಜೆ.ವಿ. ಮಂಡಳ ಕಾರ್ಯದರ್ಶಿ ಡಾ. ಜೀವನದರ್ ಅಲ್ಗೂರ್ ಮಾತನಾಡಿ, ಜೈನ ಸಮುದಾಯ ಇಂದು ಅಲ್ಪಸಂಖ್ಯೆಯಲ್ಲಿದ್ದು, ನಮ್ಮ ಆಚಾರ, ವಿಚಾರ, ಧಾರ್ಮಿಕ ನಡಾವಳಿಗಳು ಶಿಕ್ಷಣ ನೀಡುವ ಭರಾಟೆಯಲ್ಲಿ ಕ್ಷೀಣಿಸುತ್ತಿವೆ. ಇದು ಸಮುದಾಯದ ಉಳಿವಿಗೆ ದೊಡ್ಡ ಸವಾಲಾಗಿದ್ದು, ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ನೀಡಿದರೂ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳು, ವಿಧಿ-ವಿಧಾನಗಳು ಮತ್ತು ನೈತಿಕ ಮೌಲ್ಯ ಹೇಳಿಕೊಡದಿದ್ದರೆ ಎಲ್ಲವೂ ವ್ಯರ್ಥ. ಮುಂದಿನ ಪೀಳಿಗೆಯ ಭವಿಷ್ಯ ನಮ್ಮತನದ ಅಡಿಪಾಯದಲ್ಲೇ ನಿರ್ಧರಿತಗೊಂಡರೆ ಎಲ್ಲರ ಭವಿಷ್ಯ ಭದ್ರವಾಗುತ್ತದೆಂದರು. ಕಾರ್ಯಕ್ರಮದಲ್ಲಿ ಎಸ್.ಎಸ್ ಎ.ಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ,ಸಾಧನೆಗೈದ ಗಣ್ಯರ ಸನ್ಮಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಜೆ.ವಿ. ಮಂಡಲ ಅಧ್ಯಕ್ಷ ಶ್ರೀ ತಮ್ಮನ್ನ ಪಡಸಲಗಿ
ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಪ್ರವೀಣ ನಾಡ ಗೌಡ, ಸುಕುಮಾರಗೌಡ ಪಾಟೀಲ, ಸುರೇಶ ಅಕ್ಕಿವಾಟ, ಸುನೀಲ ಆಳಗೊಂಡ, ಪದ್ಮರಾಜ್ ಹಟ್ಟಿ, ಕಿರಣ್ ಕುಳ್ಳಿ, ಪದ್ಮರಾಜ್ ಹಟ್ಟಿ, ಅರುಣ್ ಕುಮಾರ್ ಕರವ, ಭೀಮಪ್ಪ ಆಲಗೂರ, ಮಹಾವೀರ ಶೇಗುಣಶಿ, ಜಿನ್ನಪ್ಪ ಕುರಪೆ, ಅಪ್ಪಾಸಾಬ, ದರ್ಶನ್ ಕಾಗಿ, ನರೇಂದ್ರ ಹಟ್ಟಿ, ಸಂಜು ಹರವಿ ಉಪಸ್ಥಿತರಿದ್ದರು. ಜನೌಕರರ ಸಂಘದ ಪದಾಧಿಕಾರಿಗಳಾದ ಧರೆಪ್ಪ ಕವಟಕೊಪ್ಪ, ಗಿರೀಶ್, ಭರತೇಶ ಲೋಕಾಪುರ್, ಮಲ್ಲಿನಾಥ ಬಾಬಣ್ಣವರ, ಮಹಾವೀರ್ ಜಮಖಂಡಿ, ಅಭಯ್ ಶಿರಗಾರ್, ಮಹಾವೀರ್ ಪಾಟೀಲ್, ಅಮಿತ್ ಯಾಬಣ್ಣವರ್, ನೇಮನಾಥ ಜಮಖಂಡಿ, ಬಂಡು ಚೌಗಲ, ಮಹೇಶ್ ಮಗದುಮ್, ಅನಿಲ್ ಶಿರಗಾರ್, ಅಜಿತ್ ಶಿರಹಟ್ಟಿ, ರಾಜು ಕಾಗವಾಡ ಕಾರ್ಯಕ್ರಮದಲ್ಲಇದ್ದರು. ಅಧ್ಯಕ್ಷರಾದ ಗಿರೀಶ್ ಪ್ರಸ್ತಾವಿಕ ನುಡಿಗಳನ್ನು ಮಾತನಾಡಿದರು. ನೇಮಿನಾಥ ಜಮಖಂಡಿ ಹಾಗೂ ಭರತೇಶ್ ಲೋಕಾಪುರ್ ನಿರೂಪಿಸಿದರು. ಮಹಾವೀರ ಸೌದತ್ತಿ ವಂದಿಸಿದರು.
ವರದಿ :
ಸಾಗರ್ ಆಳಗೊಂಡ್

