ತೇರದಾಳ್ ಪಟ್ಟಣದಲ್ಲಿ ಈದ್ ಮಿಲಾದುನ್ನಬಿ ಭರ್ಜರಿ ಆಚರಣೆ
ತೇರದಾಳ್: ಪಟ್ಟಣದ ಜಾಮಿಯಾ ಮಸೀದಿ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸ್ಮರಣಾರ್ಥ ಈದ್ ಮಿಲಾದುನ್ನಬಿ ಆಚರಣೆಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಈದ್ ಮಿಲಾದುನ್ನಬಿ ಅಂಗವಾಗಿ ಪಟ್ಟಣದಲ್ಲಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ಜಾಮಿಯಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಂತರ ಯಲ್ಲಮನ ಗುಡಿ ಹಾಗೂ ಮಹಾವೀರ ಸರ್ಕಲ್ ಮಾರ್ಗವಾಗಿ ಸಾಗಿದ ಮೆರವಣಿಗೆಯು ಮತ್ತೆ ಜಾಮಿಯಾ ಮಸೀದಿ ಸಮೀಪಕ್ಕೆ ಆಗಮಿಸಿ ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಬಾಂಧವರು ಪಾಲ್ಗೊಂಡು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳನ್ನು ಸ್ಮರಿಸಿದರು. ಧಾರ್ಮಿಕ ಭಾವೈಕ್ಯತೆ, ಸಹೋದರತೆ, ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಮೂಲಕ ಈದ್ ಮಿಲಾದುನ್ನಬಿ ಆಚರಣೆಗೆ ವಿಶೇಷ ಮೆರುಗು ನೀಡಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಿಂದ ಹಬ್ಬದ ಸಂಭ್ರಮ ಮನೆಮಾಡಿತ್ತು. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮೌಲಾನಾ ಶಮಶುಲ್ಲಾ ಹಕ್ ರಜೀವಿ, ಜಿಲಾನಿ ಜಮಾದಾರ, ಜಾಫರ್ ಮುಜಾವರ್, ಮೆಹಬೂಬ್ ಜಮಾದಾರ್, ಮೆಹಬೂಬ್ ತಹಸಿಲ್ದಾರ್, ಗೌತಮ್ ರೊಡಕರ್, ರಘುನಾಥ್ ಹಟ್ಟಿ, ಫಯಾಜ್ ಇನಾಮದರ್, ಮೈನೊದ್ದೀನ್ ಜಮಖಂಡಿ, ರಾಜು ತಹಸೀಲ್ದಾರ್, ಮೇಹಬೂಬ ಜಮಾದಾರ್, ಮುನ್ನಾ ತಾಂಬೊಳಿ , ರಾಜು ನಗರ್ಜಿ, ಮುಬಾರಕ್ ತಾಂಬೊಲಿ, ಫಜಲ್ ಅತಾರೋತ್ ಸಾಧಿಕ್ ನಾಯಕ್ವಾಡಿ ಹಾಜಿ ಇಸ್ಮಾಯಿಲ್ ಮೀರಾ ಕೊರುಬೂ ದಸಗೀರ್ ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈದ್ ಮಿಲಾದುನ್ನಬಿ ಆಚರಣೆಯು ಪಟ್ಟಣದಲ್ಲಿ ಧಾರ್ಮಿಕ ಸಂಭ್ರಮದ ಜೊತೆಗೆ ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಮತ್ತಷ್ಟು ಬಲಪಡಿಸಿತು.

